ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಅಂತ ಘೋಷಿಸಿರೋ ಸೇನೆ ಅಲ್ಪಾವಧಿ ನೇಮಕಾತಿಯ `ಅಗ್ನಿಪಥ್' ಯೋಜನೆ ಖಂಡಿಸಿ ದೇಶದ 10 ರಾಜ್ಯಗಳು ಅಗ್ನಿಕುಂಡಗಳಾಗಿವೆ. ಕಳೆದ 3 ದಿನಗಳಿಂದ ರೈಲುಗಳಿಗೆ ಬೆಂಕಿ ಹಚ್ಚಿ, ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರೈಲುಗಳನ್ನು ತಡೆದು ರೈಲ್ವೇ ಹಳಿ, ರಸ್ತೆಗಳಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದ ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಕಾರಿನ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಶಾಸಕಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ವಿರೋಧ, ಹಿಂಸಾಚಾರ ತೀವ್ರಗೊಳ್ಳುತ್ತಿರುವರನ್ನು ಅರಿತು, ಎಚ್ಚೆತ್ತಿರುವ ಕೇಂದ್ರ ಸರ್ಕಾರ `ಅಗ್ನಿಪಥ್' ನೇಮಕಾತಿಯ ವಯೋಮಿತಿಯನ್ನು ಸಡಿಲಿಕೆ ಮಾಡಿದೆ. 17.5ರಿಂದ 21ರವರೆಗೆ ಇದ್ದ ವಯೋಮಿತಿಯನ್ನು 23ಕ್ಕೆ ಏರಿಸಿದೆ. ಒಮ್ಮೆ ಮಾತ್ರ ಅನ್ವಯ ಆಗಲಿದೆ. ಅಲ್ಲದೆ, ಅಗ್ನಿಪಥ ಯೋಜನೆಯಡಿ ಸೇನೆಗೆ ಸೇರುವ `ಅಗ್ನಿವೀರ'ರಿಗೆ ಸೇವಾ ಅವಧಿಯಲ್ಲಿಯೇ ಶಿಕ್ಷಣ ಮುಂದುವರಿಸಿ 12ನೇ ತರಗತಿ ಪೂರ್ಣಗೊಳಿಸುವುದಕ್ಕೆ ಪೂರಕವಾಗಿ ವಿಶೇಷ ಕಾರ್ಯಕ್ರಮವನ್ನು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್ ರೂಪಿಸಿದೆ. ರಕ್ಷಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎನ್‍ಐಒಎಸ್ ಈ ಕಾರ್ಯಕ್ರಮ ರೂಪಿಸಿದೆ ಎಂದು ಕೇಂದ್ರೀಯ ಶಿಕ್ಷಣ ಸಚಿವಾಲಯ ತಿಳಿಸಿದೆ. ಇದನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ವಾಗತಿಸಿದ್ದು, ಯೋಜನೆಗೆ ಸ್ಫೂರ್ತಿದಾಯಕ. ಅಗ್ನಿವೀರರಿಗೆ ಕೌಶಲ್ಯದ ಜೊತೆಗೆ ಜ್ಞಾನವೂ ದೊರೆಯಲಿದೆ. ಉದ್ಯೋಗಾವಕಾಶಗಳ ಜೊತೆಗೆ ಉನ್ನತ ಶಿಕ್ಷಣ ಮುಂದುವರಿಸಲೂ ಅವಕಾಶ ಸಿಗುತ್ತದೆ ಎಂದಿದ್ದಾರೆ.
#publictv #newscafe #hrranganath